Posts

ಮರದ ಇದ್ದಿಲು -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್ )

  ಮರದ ಇದ್ದಿಲಿನ ಲಕ್ಷಣಗಳು; ಮರದ ಇದ್ದಿಲು ಮೃದುವಾದ ಘನವಸ್ತು. ಮರದ ಇದ್ದಿಲು ಕಪ್ಪಾಗಿದ್ದು ವಿದ್ಯುತ್ ಅವಾಹಕ ವಾಗಿರುತ್ತದೆ. ನೀರಿನಲ್ಲಿ ತೇಲುತ್ತದೆ. ಅನಿಲಗಳನ್ನು ಹೀರಿಕೊಳ್ಳುತ್ತದೆ. ಮರದ ಇದ್ದಿಲನ್ನು ಪಡೆಯುವಿಕೆ ; ಮರದ ತುಂಡನ್ನು ಉಳಿಸಿ ಮರದ ಇದ್ದಿಲನ್ನು ಪಡೆಯುತ್ತಾರೆ. ಮರದ ಇದ್ದಿಲಿನ ರಾಸಾಯನಿಕ ಲಕ್ಷಣಗಳು ; ಮರದ ಇದ್ದಿಲು ಹೇರಳವಾದ ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಕಾರ್ಬನ್ ಡೈಯಾಕ್ಸೈಡ್ ಅನ್ನು ಉತ್ಪಾದಿಸುತ್ತದೆ. C+ O2 ----->CO2î ಮರದ ಇದ್ದಿಲು ಮಿತವಾದ ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಕಾರ್ಬನ್ ಮಾನಾಕ್ಸೈಡ್ ಅನ್ನು ಬಿಡುಗಡೆಗೊಳಿಸುತ್ತದೆ. 2C+O2 ---->2COî ಮರದ ಇದ್ದಿಲಿನ ಉಪಯೋಗಗಳು ; ಮರದ ಇದ್ದಿಲನ್ನು ಇಂಧನವಾಗಿ ಬಳಸುತ್ತಾರೆ. ಮರದ ಇದ್ದಿಲನ್ನು ಬಂದೂಕು ಮತ್ತು ಪಟಾಕಿ ಮದ್ದುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ನೀರಿನ ಶುದ್ಧೀಕರಣ ಘಟಕಗಳಲ್ಲಿ ಬಳಸುತ್ತಾರೆ. ಅನಿಲ ಮುಖವಾಡ ಗಳಲ್ಲಿ ಬಳಸುತ್ತಾರೆ.  ಕ್ಯಾಲ್ಸಿಯಂ ಕಾರ್ಬೈಡ್ ( CaC2) ಮತ್ತು ಸಿಲಿಕಾನ್ ಕಾರ್ಬೈಡ್ (SiC) ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.